ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಎರಡು ದಿನಗಳ ದಾಖಲೆ ನೊ0ದಣಿ.
ಇದೆ ತಿಂಗಳ ತಾರೀಕು 15 ಮತ್ತು 16 ಶುಕ್ರವಾರ ಹಾಗೂ ಶನಿವಾರ ಎರಡೂ ದಿನಗಳ0ದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರನ್ನು ನೊ0ದಣಿ (Enrollment) ಮಾಡುವ ಕಾರ್ಯ ನಡೆಯಿತು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 710 ಅಭ್ಯರ್ಥಿಗಳನ್ನು ದಾಖಲೆ ಮಾಡಲಾಯಿತು. ರಾಜ್ಯದ ಎಲ್ಲಾ ಕಡೆಯಿಂದ ಅಭ್ಯರ್ಥಿಗಳು ಹಾಜರಾದ ಸನ್ನಿವೇಶದಲ್ಲಿ ಅಭ್ಯರ್ಥಿಗಳಿಗೆ ತೊ0ದರೆಯಾಗಬಾರದೆ0ದು ಶನಿವಾರವೂ ನೊ0ದಣಿಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಪರಿಷತ್ತಿನ ದಾಖಲೆ ಸಮಿತಿ (Enrollment Committee) ಅಧ್ಯಕ್ಷರಾದ ಶ್ರೀ ಆಸಿಫ಼್ ಆಲಿ ಯವರು ಹಾಗೂ ಸದಸ್ಯರಾದ ಶ್ರೀ ವಿಶಾಲ ರಘು ಹಾಗೂ ಬಿ.ವಿ. ಶ್ರೀನಿವಾಸ್ ಅವರು ದಾಖಲೆ ಕಾರ್ಯಕ್ರಮದಲ್ಲಿ ಸತತವಾಗಿ ತೊಡಗಿಸಿಕೊ0ಡರು.
ಶುಕ್ರವಾರ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ ನಟರಾಜನ್ ಅವರು ಭಾಗವಹಿಸಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ವಕೀಲರಿಗೆ ಕಿವಿ ಮಾತನ್ನು ಹೇಳಿದರು
ಎರಡನೆ ದಿನದ ಕಾರ್ಯಕ್ರಮವನ್ನು ವಕೀಲರ ಸಂಘ ಬೆಂಗಳೂರು ಹೈಕೋರ್ಟ್ ವಿಭಾಗದಲ್ಲಿ ನಡೆಸಲಾಯಿತು. ವಕೀಲರ ಸ0ಘದ ಅಧ್ಯಕ್ಶರು, ಕಾರ್ಯದರ್ಶಿಯವರು, ಖಚಾ0ಚಿ ಹಾಗೂ ಎಲ್ಲಾ ಪದಾದಿಕಾರಿಗಳಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ತನ್ನ ದನ್ಯವಾದಗಳನ್ನು ತಿಳಿಸಿದೆ.
Comments
Post a Comment