Posts

ವಕೀಲರು ನ್ಯಾಯಾಲಯಕ್ಕೆ ಹಾಜರಾಗುವಾಗ ಜೀನ್ಸ್, ಕಾರ್ಡುರಾಯ್ ಪ್ಯಾಂಟ್ ಮತ್ತು ಸ್ಪೋರ್ಟ್ ಶೂಗಳನ್ನು ಧರಿಸುವು0ತಿಲ್ಲ - ಕರ್ನಾಟಕ ರಾಜ್ಯ ವಕೀಲರ ಪರಿಷತ್

Image
ವಕೀಲರು ನ್ಯಾಯಾಲಯಕ್ಕೆ ಹಾಜರಾಗುವಾಗ  ಜೀನ್ಸ್, ಕಾರ್ಡುರಾಯ್ ಪ್ಯಾಂಟ್ ಮತ್ತು ಸ್ಪೋರ್ಟ್ ಶೂಗಳನ್ನು ಧರಿಸುವುದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಿಷೇಧಿಸಿದೆ. ಈ ಮೂಲಕ ಹೊರಡಿಸಿದ ಸೂಚನೆ ಹೀಗಿದೆ; ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅನೇಕ ಯುವ ವಕೀಲರು ಜೀನ್ಸ್, ಕಾರ್ಡುರಾಯ್ ಪ್ಯಾಂಟ್, ಸ್ಪೋರ್ಟ್ ಶೂ ಮತ್ತು ಇತರೆ ಉಡುಪುಗಳನ್ನು ಧರಿಸುವುದನ್ನು ಗಮನಿಸಿದೆ. ಭಾರತೀಯ ವಕೀಲರ ಪರಿಷತ್ ಪುರುಷ ಮತ್ತು ಮಹಿಳಾ ವಕೀಲರಿಗೆ ಸಮವಸ್ತ್ರ ಅನ್ನು ನಿಗದಿಪಡಿಸಿದೆ. ಭಾರತೀಯ ವಕೀಲರ ಪರಿಷತ್ ನಿರ್ದೇಶನಗಳ ದೃಷ್ಟಿಯಿಂದ, ವಕೀಲರು ಜೀನ್ಸ್, ಕಾರ್ಡುರಾಯ್ ಪ್ಯಾಂಟ್, ಸ್ಪೋರ್ಟ್ ಶೂಗಳು ಮತ್ತು ಅಂತಹುದೇ ಡ್ರೆಸ್‌ಗಳನ್ನು ನ್ಯಾಯಾಲಯಕ್ಕೆ ಧರಿಸುವುದನ್ನು ನಿಷೇಧಿಸಲಾಗಿದೆ ಮತ್ತು ವಕೀಲರು ಸೂಚಿಸಿದ ಡ್ರೆಸ್ ಕೋಡ್ ಅನ್ನು ಅನುಸರಿಸಲು ಈ ಮೂಲಕ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಉಲ್ಲಂಘನೆಯನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಗಂಭೀರವಾಗಿ ಪರಿಗಣಿಸುತ್ತದೆ. ವಕೀಲ ವೃತ್ತಿಯು ನೋಬೆಲ್ ವೃತ್ತಿಯಾಗಿರುವುದರಿಂದ ನ್ಯಾಯಾಲಯದ ಘನತೆ ಮತ್ತು ಸಜ್ಜನಿಕೆಯನ್ನು ಕಾಪಾಡಿಕೊಳ್ಳಲು ವಕೀಲರ ಗಮನಕ್ಕೆ ತರಲು ಮತ್ತೊಮ್ಮೆ ನಾನು ಎಲ್ಲ ವಕೀಲರ ಸ0ಘದ ಅಧ್ಯಕ್ಷರಲ್ಲಿ ವಿನಂತಿಸುತ್ತೇನೆ. -ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು .

No Jeans, Corduroy pants and Sport shoes in Courts - Karnataka State Bar Council warns Lawyers.

Image
The Karnataka State Bar Council has prohibited Lawyers from wearing Jeans, Corduroy pants and Sport shoes while attending Courts. The notice reads thus;  The Karnataka State Bar Council has observed that many young  Advocates are wearing Jeans, Corduroy pants, Sport Shoes and similar  dresses to Court.  The Bar Council of India has prescribed dress code to the  Advocates both Male and Female Advocates.  In view of Bar Council of India  directions, the Advocates are prohibited from wearing Jeans, Corduroy pants,  Sport Shoes and similar dresses to Court and it is hereby mandated that the  Advocates to follow the Dress Code prescribed.  Any violation of the same,  will be viewed seriously by Karnataka State Bar Council. Once again, I request all the Presidents to bring to the notice of the  Advocates to maintain the dignity and decorum of the Court as Advocacy is  a noble profession.   -Chairman, Karnataka State Bar Cou...

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಎರಡು ದಿನಗಳ ದಾಖಲೆ ನೊ0ದಣಿ.

Image
ಇದೆ ತಿಂಗಳ ತಾರೀಕು 15 ಮತ್ತು 16 ಶುಕ್ರವಾರ ಹಾಗೂ ಶನಿವಾರ ಎರಡೂ ದಿನಗಳ0ದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರನ್ನು ನೊ0ದಣಿ (Enrollment ) ಮಾಡುವ ಕಾರ್ಯ ನಡೆಯಿತು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 710 ಅಭ್ಯರ್ಥಿಗಳನ್ನು ದಾಖಲೆ ಮಾಡಲಾಯಿತು. ರಾಜ್ಯದ ಎಲ್ಲಾ ಕಡೆಯಿಂದ ಅಭ್ಯರ್ಥಿಗಳು ಹಾಜರಾದ ಸನ್ನಿವೇಶದಲ್ಲಿ ಅಭ್ಯರ್ಥಿಗಳಿಗೆ ತೊ0ದರೆಯಾಗಬಾರದೆ0ದು ಶನಿವಾರವೂ ನೊ0ದಣಿಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪರಿಷತ್ತಿನ ದಾಖಲೆ ಸಮಿತಿ (Enrollment Committee) ಅಧ್ಯಕ್ಷರಾದ ಶ್ರೀ ಆಸಿಫ಼್ ಆಲಿ ಯವರು ಹಾಗೂ ಸದಸ್ಯರಾದ ಶ್ರೀ ವಿಶಾಲ ರಘು ಹಾಗೂ ಬಿ.ವಿ.  ಶ್ರೀನಿವಾಸ್ ಅವರು ದಾಖಲೆ ಕಾರ್ಯಕ್ರಮದಲ್ಲಿ ಸತತವಾಗಿ ತೊಡಗಿಸಿಕೊ0ಡರು.  ಶುಕ್ರವಾರ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ ನಟರಾಜನ್ ಅವರು ಭಾಗವಹಿಸಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ವಕೀಲರಿಗೆ ಕಿವಿ ಮಾತನ್ನು ಹೇಳಿದರು  ಎರಡನೆ ದಿನದ ಕಾರ್ಯಕ್ರಮವನ್ನು ವಕೀಲರ ಸಂಘ ಬೆಂಗಳೂರು ಹೈಕೋರ್ಟ್ ವಿಭಾಗದಲ್ಲಿ ನಡೆಸಲಾಯಿತು. ವಕೀಲರ ಸ0ಘದ ಅಧ್ಯಕ್ಶರು, ಕಾರ್ಯದರ್ಶಿಯವರು, ಖಚಾ0ಚಿ ಹಾಗೂ ಎಲ್ಲಾ ಪದಾದಿಕಾರಿಗಳಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ತನ್ನ ದನ್ಯವಾದಗಳನ್ನು ತಿಳಿಸಿದೆ. 

ವಕೀಲರು ಸಾತ್ವಿಕ ಜೀವನಶೈಲಿ ರೂಡಿಸಿಕೊಳ್ಳಬೇಕು - ಪಿ ಪಿ ಹೆಗಡೆ ಕರೆ

Image
ತಾರೀಕು 15 ಜುಲೈ 2022 ರಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಕಡೂರು ವಕೀಲರ ಸ0ಘದ ಆಶ್ರಯದಲ್ಲಿ ನಡೆದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪರಿಷತ್ತಿನ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಶ್ರಿ. ಪದ್ಮಪ್ರಸಾದ್ ಹೆಗ್ಗಡೆ್ ಅವರು ‘ವಕೀಲರು ಸಾತ್ವಿಕ ಬದುಕನ್ನು ನಡೆಸುವ ಮೂಲಕ ತಮ್ಮ ಜೀವನವನ್ನು ಆರೊಗ್ಯಕರವಾಗಿ ಬಾಳಬಹುದು ಎಂದು ಹೇಳಿದರು.  ವಕೀಲರು ಇಂದು ಅತ್ಯಂತ ಕಷ್ಟಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕೆಲಸದ ಒತ್ತಡ ಮತ್ತು ಆಹಾರಶೈಲಿ ಕೂಡ ಇದಕ್ಕೆ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಸಾತ್ವಿಕ ಆಹಾರ ಹಾಗೂ ಸಾತ್ವಿಕ ಮನೋಭಾವದಿಂದ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ವಕೀಲವೃತ್ತಿಯಲ್ಲಿ ಕಲಿಕೆಯಷ್ಟೇ ಜೀವನ ಶೈಲಿ ಕೂಡ ಅತ್ಯ0ತ ಮುಖ್ಯ ಎ0ದು ಅವರು ಅಭಿಪ್ರಾಯಪಟ್ಟರು.  ಹಿತಮಿತ ಸಸ್ಯಾಹಾರಿ ಆಹಾರ ಹಾಗೂ ದುಷ್ಚಟಗಳಿ0ದ ದೂರ ಉಳಿದು ವಕೀಲವೃತ್ತಿಯನ್ನು ನಡೆಸುವುದರಿ0ದ ಸಮಾಜಕ್ಕೂ ಉತ್ತಮ ಸ0ದೇಶವನ್ನು ನೀಡಿದ0ತಾಗುತ್ತದೆ ಎ0ದು ಅವರು ಹೇಳಿದರು.  ಕರ್ನಾಟಕ ರಾಜ್ಯದ ಪರಿಷತ್ತಿನ ಸದಸ್ಯನಾಗಿ ಹಲವಾರು ಯುವ ವಕೀಲರು ತಮ್ಮ ಇಳಿವಯಸ್ಸಿನಲ್ಲಿ ಮರಣ ಹೊಂದುತ್ತಿರುವುದನ್ನು ನೋಡಿದ್ದೇನೆ ಇದು ಅತ್ಯಂತ ದುಃಖಕರ ಆದ್ದರಿಂದ ವಕೀಲರು ತಮ್ಮ ಆಹಾರ ಮನೋಭಾವ ಹಾಗೂ ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆ ತಂದುಕೊಳ್ಳಬೇಕು ಎಂದು ಅವರು ಕರೆ ನೀ...