Posts

Showing posts from July, 2022

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಎರಡು ದಿನಗಳ ದಾಖಲೆ ನೊ0ದಣಿ.

Image
ಇದೆ ತಿಂಗಳ ತಾರೀಕು 15 ಮತ್ತು 16 ಶುಕ್ರವಾರ ಹಾಗೂ ಶನಿವಾರ ಎರಡೂ ದಿನಗಳ0ದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರನ್ನು ನೊ0ದಣಿ (Enrollment ) ಮಾಡುವ ಕಾರ್ಯ ನಡೆಯಿತು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 710 ಅಭ್ಯರ್ಥಿಗಳನ್ನು ದಾಖಲೆ ಮಾಡಲಾಯಿತು. ರಾಜ್ಯದ ಎಲ್ಲಾ ಕಡೆಯಿಂದ ಅಭ್ಯರ್ಥಿಗಳು ಹಾಜರಾದ ಸನ್ನಿವೇಶದಲ್ಲಿ ಅಭ್ಯರ್ಥಿಗಳಿಗೆ ತೊ0ದರೆಯಾಗಬಾರದೆ0ದು ಶನಿವಾರವೂ ನೊ0ದಣಿಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪರಿಷತ್ತಿನ ದಾಖಲೆ ಸಮಿತಿ (Enrollment Committee) ಅಧ್ಯಕ್ಷರಾದ ಶ್ರೀ ಆಸಿಫ಼್ ಆಲಿ ಯವರು ಹಾಗೂ ಸದಸ್ಯರಾದ ಶ್ರೀ ವಿಶಾಲ ರಘು ಹಾಗೂ ಬಿ.ವಿ.  ಶ್ರೀನಿವಾಸ್ ಅವರು ದಾಖಲೆ ಕಾರ್ಯಕ್ರಮದಲ್ಲಿ ಸತತವಾಗಿ ತೊಡಗಿಸಿಕೊ0ಡರು.  ಶುಕ್ರವಾರ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಶ್ರೀ ಕೆ ನಟರಾಜನ್ ಅವರು ಭಾಗವಹಿಸಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ವಕೀಲರಿಗೆ ಕಿವಿ ಮಾತನ್ನು ಹೇಳಿದರು  ಎರಡನೆ ದಿನದ ಕಾರ್ಯಕ್ರಮವನ್ನು ವಕೀಲರ ಸಂಘ ಬೆಂಗಳೂರು ಹೈಕೋರ್ಟ್ ವಿಭಾಗದಲ್ಲಿ ನಡೆಸಲಾಯಿತು. ವಕೀಲರ ಸ0ಘದ ಅಧ್ಯಕ್ಶರು, ಕಾರ್ಯದರ್ಶಿಯವರು, ಖಚಾ0ಚಿ ಹಾಗೂ ಎಲ್ಲಾ ಪದಾದಿಕಾರಿಗಳಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ತನ್ನ ದನ್ಯವಾದಗಳನ್ನು ತಿಳಿಸಿದೆ. 

ವಕೀಲರು ಸಾತ್ವಿಕ ಜೀವನಶೈಲಿ ರೂಡಿಸಿಕೊಳ್ಳಬೇಕು - ಪಿ ಪಿ ಹೆಗಡೆ ಕರೆ

Image
ತಾರೀಕು 15 ಜುಲೈ 2022 ರಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಕಡೂರು ವಕೀಲರ ಸ0ಘದ ಆಶ್ರಯದಲ್ಲಿ ನಡೆದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪರಿಷತ್ತಿನ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಶ್ರಿ. ಪದ್ಮಪ್ರಸಾದ್ ಹೆಗ್ಗಡೆ್ ಅವರು ‘ವಕೀಲರು ಸಾತ್ವಿಕ ಬದುಕನ್ನು ನಡೆಸುವ ಮೂಲಕ ತಮ್ಮ ಜೀವನವನ್ನು ಆರೊಗ್ಯಕರವಾಗಿ ಬಾಳಬಹುದು ಎಂದು ಹೇಳಿದರು.  ವಕೀಲರು ಇಂದು ಅತ್ಯಂತ ಕಷ್ಟಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕೆಲಸದ ಒತ್ತಡ ಮತ್ತು ಆಹಾರಶೈಲಿ ಕೂಡ ಇದಕ್ಕೆ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಸಾತ್ವಿಕ ಆಹಾರ ಹಾಗೂ ಸಾತ್ವಿಕ ಮನೋಭಾವದಿಂದ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ವಕೀಲವೃತ್ತಿಯಲ್ಲಿ ಕಲಿಕೆಯಷ್ಟೇ ಜೀವನ ಶೈಲಿ ಕೂಡ ಅತ್ಯ0ತ ಮುಖ್ಯ ಎ0ದು ಅವರು ಅಭಿಪ್ರಾಯಪಟ್ಟರು.  ಹಿತಮಿತ ಸಸ್ಯಾಹಾರಿ ಆಹಾರ ಹಾಗೂ ದುಷ್ಚಟಗಳಿ0ದ ದೂರ ಉಳಿದು ವಕೀಲವೃತ್ತಿಯನ್ನು ನಡೆಸುವುದರಿ0ದ ಸಮಾಜಕ್ಕೂ ಉತ್ತಮ ಸ0ದೇಶವನ್ನು ನೀಡಿದ0ತಾಗುತ್ತದೆ ಎ0ದು ಅವರು ಹೇಳಿದರು.  ಕರ್ನಾಟಕ ರಾಜ್ಯದ ಪರಿಷತ್ತಿನ ಸದಸ್ಯನಾಗಿ ಹಲವಾರು ಯುವ ವಕೀಲರು ತಮ್ಮ ಇಳಿವಯಸ್ಸಿನಲ್ಲಿ ಮರಣ ಹೊಂದುತ್ತಿರುವುದನ್ನು ನೋಡಿದ್ದೇನೆ ಇದು ಅತ್ಯಂತ ದುಃಖಕರ ಆದ್ದರಿಂದ ವಕೀಲರು ತಮ್ಮ ಆಹಾರ ಮನೋಭಾವ ಹಾಗೂ ಜೀವನ ಶೈಲಿಯಲ್ಲಿ ಉತ್ತಮ ಬದಲಾವಣೆ ತಂದುಕೊಳ್ಳಬೇಕು ಎಂದು ಅವರು ಕರೆ ನೀ...